Telegram Join My Telegram   WhatsApp Join My WhatsApp

ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ

ಬೇಸಿಗೆಯ ಸಮಯದಲ್ಲಿ ಬಹುತೇಕರಿಗೆ ದೇಹದ ತಾಪ ಹೆಚ್ಚಳದಿಂದಾಗಿ ಸಮಸ್ಯೆಗಳು ಎದುರಿಸುತ್ತಾರೆ. ದೇಹದ ತಾಪ ಹೆಚ್ಚಾಗುವುದು ಸಂಪೂರ್ಣ ಚಟುವಟಿಕೆಯ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಸಾಮಾನ್ಯವಾಗಿ ತಲೆನೋವಿನಂತಹ ಸಮಸ್ಯೆಯಿಂದ ಹಿಡಿದು ಚರ್ಮದ ತೇವ ಒಣಗುವುದು, ಕೈ ಬೆರಳಿನ ಚರ್ಮ ಸುಲಿಯುವುದು, ಕಣ್ಣು ಉರಿ, ಉರಿ ಶೀತದಂತಹ ಸಮಸ್ಯೆ ಎದುರಿಸುವುದು ನೋಡಬಹುದು.

ಅದ್ರಲ್ಲೂ ಬೇಸಿಗೆಯಲ್ಲಿ ಅನುಭವಿಸುವ ಹಲವು ಸಮಸ್ಯೆಗಳ ಪೈಕಿ ಕಣ್ಣು ಉರಿ ಹೆಚ್ಚು ಕಾಡುತ್ತದೆ. ಕಣ್ಣಿನಲ್ಲಿ ನೀರು ಬರುವುದು, ಒಣಗುವುದು, ಕೆಂಪಾಗುವುದು, ಬಿಸಿಲಿಗೆ ಕಣ್ಣು ಬಿಡಲಾಗದ ಸ್ಥಿತಿಗೆ ಬರುವುದು ಸಹ ನೋಡಬಹುದು. ಹಾಗೆ ಕಣ್ಣು ಉರಿಯ ಸಮಸ್ಯೆಗೆ ನೀವು ಹಲವು ರೀತಿಯ ಪರಿಹಾರ ಮಾಡಿರಬಹುದು. ತಲೆಗೆ ತೆಂಗಿನ ಎಣ್ಣೆ ಹಾಕುವುದು, ಕಣ್ಣಿನ ಮೇಲೆ ಸೌತೆಕಾಯಿ ಇಟ್ಟು ವಿಶ್ರಾಂತಿ ಪಡೆಯುವುದು, ಕಣ್ಣಿಗೆ ಐಡ್ರಾಪ್ ಬಿಟ್ಟುಕೊಳ್ಳುವುದು ಈ ರೀತಿಯ ಹಲವು ಪರಿಹಾರವನ್ನು ನೀವು ಸಹ ಪ್ರಯತ್ನಿಸಿರುತ್ತೀರಿ.

ಆದ್ರೆ ಈ ಪ್ರಯತ್ನಗಳ ಹೊರತಾಗಿಯೂ ಹಲವರಿಗೆ ಪದೇ ಪದೇ ಕಣ್ಣು ಉರಿಯಂತಹ ಸಮಸ್ಯೆ ಕಾಡುತ್ತದೆ. ಇದು ಬೇಸಿಗೆಯಲ್ಲಿಯೇ ಹೆಚ್ಚಾಗುವುದು ಸಹ ನೋಡಬಹುದು. ಆದ್ರೆ ನಾವಿಂದು ಸುಲಭವಾಗಿ ಕಣ್ಣಿನ ಉರಿಯನ್ನು ಕಡಿಮೆ ಮಾಡುವಂತಹ ಸುಲಭದ ಜ್ಯೂಸ್ ಕುರಿತಾಗಿ ತಿಳಿದುಕೊಳ್ಳೋಣ. ಕಣ್ಣು ತಂಪಾಗಿಸುವ ಈ ಮಿಶ್ರಣ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ತಿಳಿದುಕೊಳ್ಳಿ.

ಆದ್ರೆ ಈ ಪ್ರಯತ್ನಗಳ ಹೊರತಾಗಿಯೂ ಹಲವರಿಗೆ ಪದೇ ಪದೇ ಕಣ್ಣು ಉರಿಯಂತಹ ಸಮಸ್ಯೆ ಕಾಡುತ್ತದೆ. ಇದು ಬೇಸಿಗೆಯಲ್ಲಿಯೇ ಹೆಚ್ಚಾಗುವುದು ಸಹ ನೋಡಬಹುದು. ಆದ್ರೆ ನಾವಿಂದು ಸುಲಭವಾಗಿ ಕಣ್ಣಿನ ಉರಿಯನ್ನು ಕಡಿಮೆ ಮಾಡುವಂತಹ ಸುಲಭದ ಜ್ಯೂಸ್ ಕುರಿತಾಗಿ ತಿಳಿದುಕೊಳ್ಳೋಣ. ಕಣ್ಣು ತಂಪಾಗಿಸುವ ಈ ಮಿಶ್ರಣ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ತಿಳಿದುಕೊಳ್ಳಿ.

ಕಣ್ಣು ತಂಪಾಗಿಸುವ ಜ್ಯೂಸ್ ಮಾಡಲು ಬೇಕಾಗುವ ಪದಾರ್ಥ

ಸೋಂಪುಕಾಳು

ಬಾದಾಮಿ

ಕಲ್ಲು ಸಕ್ಕರೆ

ಕಾಳುಮೆಣಸು

ಕಣ್ಣು ತಂಪಾಗಿಸುವ ಜ್ಯೂಸ್ ಮಾಡುವ ವಿಧಾನವೇನು?

ಮೊದಲು ಒಂದು ಮಿಕ್ಸಿ ಜಾರ್‌ ತೆಗೆದುಕೊಂಡು ಅದಕ್ಕೆ 3 ಸ್ಪೂನ್ ಸೋಂಪುಕಾಳು, ಹಾಗೆ ಕಾಳು ಮೆಣಸುಗಳ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿ. ಪುಡಿ ಮಾಡಿರುವುದಕ್ಕೆ ಮತ್ತೆ ಬಾದಾಮಿ ಸೇರಿಸಿ, ಹಾಗೆ ಸಣ್ಣದಾಗಿ ಪುಡಿ ಮಾಡಿದ್ದ ಕಲ್ಲು ಸಕ್ಕರೆಯನ್ನು ಇದಕ್ಕೆ ಹಾಕಿಕೊಳ್ಳಿ. ನಂತರ ಮತ್ತೆ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಇದು ನುಣ್ಣಗೆ ಪುಡಿಯಾಗಬೇಕು.

ನಂತರ ಈ ಪುಡಿಯನ್ನು ಬಿಸಿ ಮಾಡಿರುವ ಹಾಲಿನೊಂದಿಗೆ ಬೆರಸಿಕೊಂಡು ಕುಡಿಯಬೇಕು. ರಾತ್ರಿ ಊಟ ಮಾಡಿದ ಬಳಿಕ ಈ ಮಿಶ್ರಣವನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಕಣ್ಣಿನ ದೃಷ್ಟಿಗೆ ಉತ್ತಮ ಹಾಗೆ ಕಣ್ಣು ಉರಿ ಬರುವುದು, ನೀರು ಬರುವುದು, ಕೆಂಪಗಾಗುವುದು ಸೇರಿ ಹಲವು ರೀತಿಯ ಸಮಸ್ಯೆಗೆ ಪರಿಹಾರ ನೀಡಲಿದೆ. ನೀವು ಸಹ ಮನೆಯಲ್ಲಿ ಈ ಮದ್ದನ್ನು ಮಾಡಿ ಸವಿದು ನೋಡಿ.

ಕಲ್ಲು ಸಕ್ಕರೆಯ ಪ್ರಯೋಜನಗಳು

ಕಲ್ಲು ಸಕ್ಕರೆಯನ್ನು ಪ್ರಾಚೀನ ಕಾಲದಿಂದಲೂ ಔಷಧಿಯ ಕಾರಣಕ್ಕೆ ಬಳಸಲಾಗುತ್ತಿದೆ. ಇದರಲ್ಲಿನ ಹಲವು ರೀತಿಯ ವಿಟಮಿನ್ ಮತ್ತು ಖನಿಜಗಳು ದೇಹಕ್ಕೆ ಬಹಳ ಉತ್ತಮ. ನಿಮ್ಮ ದೇಹ ಬಹಳ ಉಷ್ಣದಿಂದ ಕೂಡಿದ್ದರೆ ಉರಿಯೂತವಿದ್ದರೆ ಈ ಕಲ್ಲುಸಕ್ಕರೆಯಿಂದ ಮಾಡಲಾಗಿರುವ ಖಾದ್ಯಗಳ ಸವಿಯೋದು ಬಹಳ ಮುಖ್ಯ. ವಿಟಮಿನ್ b12 ಕಲ್ಲು ಸಕ್ಕರೆಯಲ್ಲಿದೆ, ಇದು ನರ ಕೋಶಗಳ ಆರೋಗ್ಯ, ಡಿಎನ್ಎ ಸಂಶ್ಲೇಷಣೆ ಮತ್ತು ಕೆಂಪು ರಕ್ತ ಕಣಗಳ ರಚನೆಗೆ ಸಹಕಾರಿಯಾಗಲಿದೆ. ಶೀತ, ಕೆಮ್ಮು ಹಾಗೂ ಗಂಟಲು ನೋವು ಕಾಣಿಸಿಕೊಂಡಾಗಲು ಸಹ ಈ ಕಲ್ಲು ಸಕ್ಕರೆಯ ಪಾನಿಯಗಳು ಉಪಶಮನ ನೀಡಲಿದೆ. ಕಲ್ಲುಸಕ್ಕರೆ ಬಾಯಿಯ ವಾಸನೆಯನ್ನು ದೂರ ಮಾಡುವ ವಿಶೇಷ ಗುಣವನ್ನು ಹೊಂದಿದೆ. ಕಲ್ಲು ಸಕ್ಕರೆ ನಿಮ್ಮ ನೆನಪಿನ ಶಕ್ತಿ ವೃದ್ಧಿಸುವ ಹಾಗೆ ಉತ್ತಮ ನಿದ್ರೆಗೆ ಸಹಕರಿಸುವ ಅಂಶಗಳನ್ನು ಸಹ ಹೊಂದಿದೆ.

More: ka02.com

Leave a Comment